Kannada Poets
Bio

SANGAM 2022

ಇವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನವರು. ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಇವರು ಈಗಾಗಲೇ ಕೆಂಪುದೀಪ ಎನ್ನುವ ಕವನ ಸಂಕಲನವನ್ನು ಹೊರತಂದಿದ್ದಾರೆ. ನಾಡಿನ ಅನೇಕ ಸಮ್ಮೇಳನ, ಉತ್ಸವಗಳಲ್ಲಿ ಕವನ ವಾಚನವನ್ನು ಮಾಡಿದ್ದಾರೆ.


ಅಂಬಿಗರ ಮಂಜು

ಭುವನಾ ಹಿರೇಮಠ
Bio

SANGAM 2022

೧೯೮೪ ನವೆಂಬರ್ ೩ ರಂದು ಬೆಳಗಾವಿ ಜಿಲ್ಲೆ, ಬೈಲಹೆಂಗಲ ತಾಲೂಕು, ಸೋಮನಟ್ಟಿ ಎೆಂಬ ಪುಟ್ಿ ಊರಿನಲ್ಲೆ ಜನಿಸಿದ ಇವರು, ಎಮ್.ಎಸ್.ಸಿ ಭೌತಶಾಸ್ತ್ರದಲ್ಲೆ ಸ್ನಾತಕೋತ್ರ ಪದವಿ ಹೆಂದಿ ಪ್ರೌಢಶಾಲ್ಲಯಲ್ಲೆ ಗಣಿತ ಶಿಕ್ಷಕಿಯಾಗಿ ಕಾಯಯ ನಿವಯಹಿಸುತ್ತ್ದ್ದಾರೆ. ಇವರ ಕವಿತೆ ಕತೆ ಲೇಖನಗಳು ನಾಡಿನ ಹಲವಾರು ಪತ್ತೌಕೆಗಳಲ್ಲೆ ಪೌಕಟ್ಗೆಂಡಿವ. ೨೦೧೮ರಲ್ಲೆ 'ಟ್ೌಯಲ್ ರೂಮಿನ ಅಪಸರೆಯರು' ಎೆಂಬ ಮೊದಲ ಕವನ ಸಂಕಲನವನ್ನಾ ಪಲೆವ ಪೌಕಾಶನ ಹಸ್ತಪೇಟೆ, ಇವರು ಪೌಕಟ್ಟಸಿದ್ದಾರೆ. ಈ ಸಂಕಲನಕೆೆ 'ಕಾಜಾಣ ಯುವ ಪುರಸ್ನೆರ-೨೦೧೯' 'ವಿ.ಚಿ.ಉದಯೋನ್ನುಖ ಪುರಸ್ನೆರ-೨೦೧೯' 'ರಾಜಯಮಟ್ಿದ ಜನಾಾ ಸ್ತನದಿ ಸ್ನಹಿತಯ ಪುರಸ್ನೆರ-೨೦೧೯' 'ಅಮು ಪೌಶಸಿ್-೨೦೧೯' ಗಳು ಲಭಿಸಿವ. 'ನಿೋಲ್ಲ ಚಕೌಕೆೆ ಕಾಲ್ಲರಬೇಕಿತ್ತ್' ಎೆಂಬ ಪದಯವು ಮಂಗಳೂರು ವಿಶವವಿದ್ದಯನಿಲಯದ ಪೌಥಮ ಬಿಎ ಕನಾಡ ವಿಷಯಕೆೆ ಪಠ್ಯವಾಗಿದೆ. ೨೦೨೧ ರಲ್ಲೆ 'ಮತೆ್ ಮತೆ್ ಮತಯಯಕಿೆಳಿಯುತೆ್ೋನೆ' ಎೆಂಬ ಎರಡನೇ ಕವನ ಸಂಕಲನ 'ಸ್ತಮಕಾಲ್ಲೋನ ಓದುಬರಹ' ಪೌಕಾಶನದಿೆಂದ ಪೌಕಟ್ಗೆಂಡಿದೆ.

Bio

SANGAM 2022

ಚಾಂದ್ ಪಾಷ ಎನ್ ಎಸ್ ( ಕವಿಚಂದ್ರ ) ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದವರು . ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಎಂ ಎ ಪದವಿ ಪಡೆದಿದು, ಈಗ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. " ಮೌನದ ಮಳೆ ” ಪ್ರಕಟಿತ ಸಂಕಲನ ( ೨೦೧೫ ) " ಧೂಳಿಡಿದ ನಕ್ಷತ್ರ " ( ನಾಟಕ ) " ಚಿತ್ರ ಚಿಗುರುವ ಹೊತ್ತು" (ಕವನ ಸಂಕಲನ) ಪ್ರಕಟವಾಗಿದೆ. ಇಟಲಿಯ ಪಿಯಾಸೆಂಜಾದಲ್ಲಿರುವ "ಪಿಕ್ಕೋಲೊ ಮ್ಯೂಸಿಯೊ ಡೆಲ್ಲಾ ಪೊಸಿಯ" ದಲ್ಲಿ ಕವಿತೆಯೊಂದು ಪ್ರದರ್ಶನವಾಗಿದೆ. ಶ್ರೀಲಂಕಾದಲ್ಲಿ ನಡೆದ ತೀರ್ಥ ಫರ್ಫಾಮೆನ್ಸ್ ಫ್ಲಾಟ್ ಫಾಮ್ ೨೦೧೯, ಮೈಸೂರು ದಸರ ಕವಿಗೋಷ್ಠಿ ೨೦೧೮, ಬೆಂಗಳೂರು ಲಿಟರೇಚರ್ ಫೆಸ್ಟಿವಲ್ ೨೦೧೭, ಲಾಂಗ್ವೇಜ್ ಫೆಸ್ಟಿವಲ್, SIWಇ ಪೊಯೆಟ್ರಿ ಫೆಸ್ಟಿವಲ್ ಕೇರಳ ೨೦೧೮, ೨೦೧೯, ಲಿಟರೇಚರ್ ಫೆಸ್ಟಿವಲ್ ಹೈದರಾಬಾದ್ ೨೦೨೦, ಇತರ ಪ್ರಮುಖ ಕಾವ್ಯ ಗೋಷ್ಠಿಯಲ್ಲಿ ಕವಿತಾ ವಾಚನ ಮಾಡಿದ್ದಾರೆ. ೨೦೨೦ ರ ಸಾಲಿನ " ಚಿ. ಶ್ರೀನಿವಾಸರಾಜು ಕಾವ್ಯ ಪ್ರಶಸ್ತಿ", "ಅವ್ವ ಪ್ರಶಸ್ತಿ", “ಕುವೆಂಪು ಯುವ ಕವಿ ಪ್ರಶಸ್ತಿ” ." ಕಾವ್ಯ ಮನೆ ಕಾವ್ಯಪುರಸ್ಕಾರ " , ಎನ್ಕೆ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ. ೨೦೨೨ ನೆ ಸಾಲಿನ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಿ ಎ ಎರಡನೆ ಸೆಮಿಸ್ಟರ್ ಗೆ ಒಂದು ಕವಿತೆ ಪಠ್ಯವಾಗಿದೆ. ಇವರ ಕವಿತೆಗಳು ಸ್ಪ್ಯಾನಿಷ್, ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳಿಗೆ ಅನುವಾದವಾಗಿವೆ.


ಚಾಂದ್ ಪಾಷ ಎನ್ ಎಸ್

ಚೇತನ್ ನಾಗರಾಳ
Bio

SANGAM 2022

ಚೇತನ್ ನಾಗರಾಳ ಎನ್ನುವ ಕಾವ್ಯನಾಮದಲ್ಲಿ ಕಳೆದ ಆರೇಳು ವರ್ಷಗಳಿಂದ ಕವಿತೆಗಳು ಮತ್ತು ಗಜಲ್ ಗಳನ್ನು ರಚಿಸುತ್ತಿರುವ ಚನ್ನಮಲ್ಲಪ್ಪ ನಾಗರಾಳ ಅವರು ಮೂಲತಃ ಬಾಗಲಕೋಟ ಜಿಲ್ಲೆಯ ಬೀಳಗಿಯವರು. ಸದ್ಯ ಖಾಸಗಿ ಬ್ಯಾಂಕೊAದರಲ್ಲಿ ವೃತ್ತಿ ಜೀವನ ಸಾಗಿಸುತ್ತಿರುವ ಇವರು ೨೦೧೮ರಲ್ಲಿ ಹೀಗೊಂದು ಯುದ್ಧ ಬುದ್ಧನೊಂದಿಗೆಕವನ ಸಂಕಲನವನ್ನು ಮತ್ತು ಖಾಲಿ ಕೋಣೆಯ ಹಾಡು ಎನ್ನುವ ಗಜಲ್ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಈಗ ಇವರ ಮೂರನೇ ಕೃತಿ ಉಸಿರು ಮಾರುವ ಹುಡುಗಗಜಲ್ ಸಂಕಲನಸದ್ಯ ಅಚ್ಚಿನ ಮನೆಯಲ್ಲಿದೆ. ರಾಜ್ಯದ ಹಲವಾರು ಸಂಘ ಸಂಸ್ಥೆಗಳು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳು ಆಯೋಜಿಸಿದ್ದ ಕವಿಗೋಷ್ಟಿಗಳಲ್ಲಿ ಪಾಲ್ಗೊಂಡಿದ್ದಾರೆ. ಅನುವಾದದಲ್ಲೂ ಆಸಕ್ತಿ ಹೊಂದಿ ಗುಲ್ಜಾರ್, ಗಾಲಿಬ್, ರಾಹತ್ ಇಂದೋರಿಯವರ ಕೆಲವು ಕವಿತೆಗಳನ್ನು ಅನುವಾದಿಸಿದ್ದಾರೆ. ಜೊತೆಗೆ ಸಾಹಿತ್ಯದಿಂದಲೇ ಸಿಕ್ಕ ಗೆಳೆಯರೊಂದಿಗೆ ಸೇರಿ ತೆನೆ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಯಶಸ್ವಿಯಾಗಿ ಎರಡು ಕಾವ್ಯ ಮತ್ತು ಕಥಾ ಕಮ್ಮಟಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅದರೊಂದಿಗೆ ಅದೇ ಗೆಳೆಯರೊಂದಾಗಿ ಕಾಚಕ್ಕಿ ಪ್ರಕಾಶನವನ್ನು ಪ್ರಾರಂಭಿಸಿ ಈಗಾಗಲೇ ಕನ್ನಡ ಸಾಹಿತ್ಯ ಲೋಕಕ್ಕೆ ವಿವಿಧ ಲೇಖಕರ ೮ ಕೃತಿಗಳನ್ನು ಪ್ರಕಟಿಸಿದ್ದಾರೆ.

Bio

SANGAM 2022

ಕೃಷ್ಣ ದೇವಾಂಗಮಠ. ಅಗಸ್ಟ ೧೪, ೧೯೯೫ ರಂದು ಸವದತ್ತಿಯಲ್ಲಿ ಜನನ. ಸದ್ಯ ಧಾರವಾಡದಲ್ಲಿ ವಾಸ. ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಕಾಲ ಕೆಲಸ ಮಾಡಿದ ಅನುಭವ. ೨೦೧೪ ರಲ್ಲಿ ಪುಸ್ತಕ ಪ್ರಾಧಿಕಾರದ ಸಹಾಯಧನ ಪಡೆದು ನಲ್ಮೆಯ ಭಾವಬುತ್ತಿ ಎಂಬ ಕವನ ಸಂಕಲನ ಪ್ರಕಟಣೆ. ಫೋಟೋಗ್ರಫಿ, ಪ್ರವಾಸ, ಸಂಗೀತ, ರಂಗಭೂಮಿ, ಸಿನಿಮಾ ಆಸಕ್ತಿಯ ಕ್ಷೇತ್ರಗಳು. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಕವಿತೆ, ಕಥೆ ಮತ್ತು ಬರಹಗಳು ಪ್ರಕಟವಾಗಿವೆ. ಕೆಂಡಸAಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣ ಬರಹಗಳು ಪ್ರಕಟಗೊಂಡಿವೆ. ಓಚಿಣioಟಿಚಿಟ ಉeogಡಿಚಿಠಿhiಛಿ iಟಿಜiಚಿ, ಃBಅ Wiಟಜಟiಜಿe, ಂsiಚಿಟಿ ಠಿhoಣogಡಿಚಿಠಿhಥಿ, ಅಚಿಟಿಜಥಿ mಚಿg, ಅhiiz mಚಿgಚಿziಟಿe ಸೇರಿದಂತೆ ಹಲವಾರು ಅಂತರಾಷ್ಟಿçÃಯ ಪತ್ರಿಕೆಗಳಲ್ಲಿ ಛಾಯಾಚಿತ್ರಗಳು ಪ್ರಕಟಗೊಂಡಿವೆ. ಸೃಜನಶೀಲ ಯುವ ಬರಹಗಾರರಿಗೆ ನೀಡುವ ಟೋಟೋ ಪ್ರಶಸ್ತಿ-೨೦೨೨ ಸೇರಿದಂತೆ ಕವಿತೆ ಮತ್ತು ಫೋಟೋಗ್ರಫಿಯ ಕಾರಣಕ್ಕಾಗಿ ಕೆಲವು ಪ್ರಶಸ್ತಿಗಳು ಸಂದಿವೆ.


ಗಿರೀಶ ಚಂದ್ರಕಾoತ ಜಕಾಪುರೆ

ವಿ ಹರಿನಾಥ ಬಾಬು
Bio

SANGAM 2022

ವಿ.ಹರಿನಾಥ ಬಾಬು ಎಂಬ ಹೆಸರಿನ ನಾನು ಮೂಲತಃ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಕೋಟೆಹಾಳು ಸೂಗೂರಿನವನು. ಸರಕಾರಿ ಪ್ರೌಢಶಾಲಾ ಶಿಕ್ಷಕನಾಗಿ ತೆಕ್ಕಲಕೋಟೆಯಲ್ಲಿ ೧೯೯೮ ರಲ್ಲಿ ಸೇವೆ ಪ್ರಾರಂಭಿಸಿ ಅಲ್ಲಿಂದ ಸಿರುಗುಪ್ಪಾದ ನಾನು ಓದಿದ್ದ ಆಗಿನ ಬೋರ್ಡ್ ಹೈಸ್ಕೂಲ್ ಮತ್ತು ಈಗಿನ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ವರ್ಗವಾಗಿ ನಾಲ್ಕಾರು ವರ್ಷದ ಸೇವೆಯ ನಂತರ ಪಿಯು ಕಾಲೇಜಿಗೆ ಆಂಗ್ಲ ಭಾಷಾ ಉಪನ್ಯಾಸಕನಾಗಿ ಬಡ್ತಿ ಹೊಂದಿ ಮತ್ತದೇ ತೆಕ್ಕಲಕೋಟೆಗೆ ವರ್ಗಾವಣೆಗೊಂಡೆ. ಈ ನಡುವೆ ಲೋಕಸೇವಾ ಆಯೋಗವು ಕರೆದಿದ್ದ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಅರ್ಜಿ ಗುಜರಾಯಿಸಿ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯ ಹಲವು ಪ್ರಹಸನಗಳನ್ನು ಎದುರಿಸಿ ಕೊನೆಗೂ ಗ್ರೂಪ್ ಬಿ ಅಧಿಕಾರಿಯಾಗಿ ಖಜಾನೆ ಇಲಾಖೆಗೆ ಸಹಾಯಕ ಖಜಾನಾಧಿಕಾರಿಯೆಂದು ಆಯ್ಕೆಗೊಂಡು ೨೦೦೬ ರಲ್ಲಿ ವರದಿ ಮಾಡಿಕೊಂಡೆ. ಅಲ್ಲಿಂದ ಇಲ್ಲಿಯವರೆಗೆ ಎರಡು ಬಡ್ತಿಯೊಂದಿಗೆ ಗಂಗಾವತಿ, ಕೊಪ್ಪಳ, ಹೊಸಪೇಟೆ, ಯಾದಗಿರಿ, ರಾಯಚೂರು ಊರಗಳ ಸುತ್ತಿ ಸದ್ಯ ಉಪ ನಿರ್ದೇಶಕನಾಗಿ ಜಿಲ್ಲಾ ಖಜಾನೆ ಗದಗದಲ್ಲಿ ಮುಂದುವರಿದಿರುವೆ.
೨೦೧೦ ರಲ್ಲಿ ಪಲ್ಲವ ಪ್ರಕಾಶನದ ಮೂಲಕ "ಬೆಳಕ ಹೆಜ್ಜೆಯನರಸಿ" ಎಂಬ ಚೊಚ್ಚಲ ಕವನ ಸಂಕಲನ ಹೊರ ಬರುವಂತಾಗಿ ಕವಿ ಎಂದು ನೋಂದಾಯಿಸಿಕೊಂಡೆ. ಈ 'ಬೆಳಕು' ಗುಲ್ಬರ್ಗಾ ವಿಶ್ವವಿದ್ಯಾಲಯ ನೀಡುವ ರಾಜ್ಯೋತ್ಸವ ಪ್ರಶಸ್ತಿ, ಧಾರವಾಡದ ಕಣವಿ ಪ್ರಶಸ್ತಿ, ಮಂಡ್ಯದ ಅಡ್ವೈಜರ್ ಪತ್ರಿಕೆಯ ಪ್ರಶಸ್ತಿ ಇತ್ಯಾದಿ ಐದಾರು ಪ್ರಶಸ್ತಿಗಳನ್ನು ದೊರಕಿಸಿಕೊಟ್ಟಿತು.

Bio

SANGAM 2022

ಲೇಖಕ ಹುಲಿಕಟ್ಟಿ ಚನ್ನಬಸಪ್ಪನವರು ಮೂಲತಃ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯವರು. 1986ರಲ್ಲಿ ಸಮುದಾಯ ಸಾಂಸ್ಕೃತಿಕ ಸಂಘಟನೆಯು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದ ಅಣುಸಮರಕ್ಕೆ ಜನತೆಯ ತಡೆ ಜಾಥಾಕ್ಕಾಗಿ ಅವರು ರಚಿಸಿದ "ತಲೆಗಳು ಉರುಳ್ಯಾವೋ"ಎಂಬ ಹಾಡು ಜನಮಾನಸವನ್ನು ತಲುಪುವಲ್ಲಿ ಯಶಸ್ವಿಯಾಯಿತು.
1988ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿಜೀವನವನ್ನು ಆರಂಭಿಸಿದ ಅವರು ಗೌರವ ಶಿಕ್ಷಕರ ಸಂಘಟನೆ, ಸಮುದಾಯ, ಭಾರತ ಜ್ಞಾನ - ವಿಜ್ಞಾನ ಸಮಿತಿ, ಸರಕಾರಿ ನೌಕರರ ಒಕ್ಕೂಟ, ಕನ್ನಡಸಾಹಿತ್ಯ ಪರಿಷತ್ತಿನ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಜೊತೆಗೆ 'ಬದುಕಿಗಾಗಿ ಕಲೆ' ಎಂಬ ಧೋರಣೆಯೊಂದಿಗೆ ಕಾವ್ಯ ಕೃಷಿಯಲ್ಲಿಯೂ ತೊಡಗಿಕೊಂಡ ಅವರು ‘ಕೂಗು', 'ಅವ್ವ ಹಚ್ಚಿದ ದೀಪ’, ‘ಬೆಳಕಿನ ಹಣತೆ’, ಬಾವುಟದ ಬಟ್ಟೆ’, 'ಎದೆಯ ಗೂಡಿನ ಹಾಡು’ ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೇ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಕವನಗಳನ್ನು ಸಂಗ್ರಹಿಸಿ ‘ಸತ್ತಾವೋ ಹರೆಯಗಳು’ ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಕಾವ್ಯದ ಜೊತೆಗೆ ಕಥಾ ಲೋಕದತ್ತಲೂ ಲೇಖನಿ ಹರಿಸಿರುವ ಚನ್ನಬಸಪ್ಪನವರು ‘ಹೆಣದ ಮೇಲೆ’ ಎಂಬ ಕಥಾಸಂಕಲನವನ್ನು ರಚಿಸಿದ್ದಾರೆ. 2019ರಲ್ಲಿ ಸಿರುಗುಪ್ಪ ತಾಲೂಕಿನಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ. 2018ರಲ್ಲಿ ಸೇವೆಯಿಂದ ನಿವೃತ್ತರಾದ ಹುಲಿಕಟ್ಟಿ ಚನ್ನಬಸಪ್ಪನವರು ಸದ್ಯ ಹರಿಹರದಲ್ಲಿ ನೆಲೆಸಿದ್ದಾರೆ.


ಹುಲಿಕಟ್ಟಿ ಚನ್ನಬಸಪ್ಪ

ಎ ಎಂ ಜಯಶ್ರೀ
Bio

SANGAM 2022

ಎ ಎಮ್ ಜಯಶ್ರೀ, ಬಳ್ಳಾರಿ, ವೃತ್ತಿ: ಪ್ರಸ್ತುತ ವಯಸ್ಕರ ಶಿಕ್ಷಣ ಅಧಿಕಾರಿಯಾಗಿ ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಒಲವು. ಸ್ವರಚಿತ ನಾಲ್ಕು ಕವನ ಸಂಕಲನಗಳನ್ನು ಮತ್ತು ಎರಡು ಗದ್ಯ ಕೃತಿಗಳನ್ನು ರಚಿಸಿದ್ದಾರೆ. ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಆಕಾಶವಾಣಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನ ನಡೆಸಿಕೊಟ್ಟಿದ್ದಾರೆ.

Bio

SANGAM 2022

ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದವರಾದ ಕೈದಾಳ್ ಕೃಷ್ಣಮೂರ್ತಿಯವರು ಕಳೆದ ೧೫ ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಯಾದಗಿರಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಸ್ನಾತೋಕತ್ತರ ಪದವೀಧರರಾದ ಇವರು ‘ಸಮುದ್ರೆ’ ಎಂಬ ಕವನಸಂಕಲನದ ಮೂಲಕ ಕನ್ನಡ ಕಾವ್ಯಲೋಕಕ್ಕೆ ಪ್ರವೇಶ ಪಡೆದು, ಕಾವ್ಯಪ್ರಕಾರವೇ ತನ್ನ ಶಕ್ತಿಯೆಂದು ನಂಬಿದ್ದಾರೆ. ತಮ್ಮ ಕವಿತೆಗಳಿಗೆ ಸಂಕ್ರಮಣ, ಸAಚಯ, ಜನಮಿತ್ರ ಕಾವ್ಯಸ್ಪರ್ಧೆಗಳಲ್ಲಿ ಪುರಸ್ಕಾರವನ್ನು ಪಡೆದಿದ್ದಾರೆ. ಚಳುವಳಿಯಲ್ಲಿ ಕಾರ್ಯಕರ್ತನಾಗಿ ದುಡಿದ ಚಂದ್ರಶೇಖರ್ ತೋರಣಘಟ್ಟರ ಬದುಕಿನ ಕಥನವನ್ನು ಕಟ್ಟಿಕೊಡುವ ‘ಚಂದ್ರಶಿಕಾರಿ’ ಎಂಬ ವಿಶಿಷ್ಟ ನೆಲೆಯ ಪುಸ್ತಕವನ್ನು ಸಂಪಾದಿಸಿಕೊಟ್ಟಿದ್ದಾರೆ. ಸೂಫಿ ಮತ್ತು ಶರಣ ಚಳುವಳಿಗಳೆರಡರ ಪ್ರಭಾವಕ್ಕೆ ಸಿಲುಕಿ ಹೊಸಸಂಕರವನ್ನೇ ಕಂಡುಕೊAಡ ಪರಂಪರೆಗಳ ಅಧ್ಯಯನದಲ್ಲಿ ತೊಡಗಿರುವ ಇವರು ಹೊಸಬಗೆಯ ಒತ್ತಿಗೆಯನ್ನು ನೀಡಬಲ್ಲರೆಂಬ ಆಶಯದೊಂದಿಗೆ…………


ಕೈದಾಳ್ ಕೃಷ್ಣಮೂರ್ತಿ

ಕೃಷ್ಣ ದೇವಾಂಗಮಠ
Bio

SANGAM 2022

ಕೃಷ್ಣ ದೇವಾಂಗಮಠ. ಅಗಸ್ಟ ೧೪, ೧೯೯೫ ರಂದು ಸವದತ್ತಿಯಲ್ಲಿ ಜನನ. ಸದ್ಯ ಧಾರವಾಡದಲ್ಲಿ ವಾಸ. ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಕಾಲ ಕೆಲಸ ಮಾಡಿದ ಅನುಭವ. ೨೦೧೪ ರಲ್ಲಿ ಪುಸ್ತಕ ಪ್ರಾಧಿಕಾರದ ಸಹಾಯಧನ ಪಡೆದು ನಲ್ಮೆಯ ಭಾವಬುತ್ತಿ ಎಂಬ ಕವನ ಸಂಕಲನ ಪ್ರಕಟಣೆ. ಫೋಟೋಗ್ರಫಿ, ಪ್ರವಾಸ, ಸಂಗೀತ, ರಂಗಭೂಮಿ, ಸಿನಿಮಾ ಆಸಕ್ತಿಯ ಕ್ಷೇತ್ರಗಳು. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಕವಿತೆ, ಕಥೆ ಮತ್ತು ಬರಹಗಳು ಪ್ರಕಟವಾಗಿವೆ. ಕೆಂಡಸAಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣ ಬರಹಗಳು ಪ್ರಕಟಗೊಂಡಿವೆ. ಓಚಿಣioಟಿಚಿಟ ಉeogಡಿಚಿಠಿhiಛಿ iಟಿಜiಚಿ, ಃBಅ Wiಟಜಟiಜಿe, ಂsiಚಿಟಿ ಠಿhoಣogಡಿಚಿಠಿhಥಿ, ಅಚಿಟಿಜಥಿ mಚಿg, ಅhiiz mಚಿgಚಿziಟಿe ಸೇರಿದಂತೆ ಹಲವಾರು ಅಂತರಾಷ್ಟಿçÃಯ ಪತ್ರಿಕೆಗಳಲ್ಲಿ ಛಾಯಾಚಿತ್ರಗಳು ಪ್ರಕಟಗೊಂಡಿವೆ. ಸೃಜನಶೀಲ ಯುವ ಬರಹಗಾರರಿಗೆ ನೀಡುವ ಟೋಟೋ ಪ್ರಶಸ್ತಿ-೨೦೨೨ ಸೇರಿದಂತೆ ಕವಿತೆ ಮತ್ತು ಫೋಟೋಗ್ರಫಿಯ ಕಾರಣಕ್ಕಾಗಿ ಕೆಲವು ಪ್ರಶಸ್ತಿಗಳು ಸಂದಿವೆ.

Bio

SANGAM 2022

ವೃತ್ತಿಯಲ್ಲಿ ಇಂಗ್ಲಿಷ್ ಅಧ್ಯಾಪಕಿಯಾಗಿರುವ ಮಧುರಾಣಿ ಎಚ್ ಎಸ್ ಮೂಲತಃ ದಾವಣಗೆರೆ ಸೀಮೆಯವರು. ಪ್ರಸ್ತುತ ಮೈಸೂರಿನಲ್ಲಿರುವ ಇವರು ಕವಯತ್ರಿ, ಅಂಕಣಕರ‍್ತಿ ಹಾಗೂ ಭಾಷಾಂತರಕಾರರು. ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ ನಿಯಮಿತ ಲೇಖನಗಳು ಪ್ರಕಟಗೊಂಡಿವೆ. 'ಕೆಂಡಸಂಪಿಗೆ' ಇ-ಪತ್ರಿಕೆಯ ಅಂಕಣ ಬರಹಗಾರರು. ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿಯೂ ಸೇರಿದಂತೆ ಹಲವೆಡೆ ಇವರ ಕವಿತೆಗಳು ಪ್ರಶಂಸಿಸಲ್ಪಟ್ಟಿವೆ. ಇವರ ಮೊದಲ ಕವನ ಸಂಕಲನ‌ 'ನವಿಲುಗರಿಯ ಬೇಲಿ' ಪುಸ್ತಕ‌ ಪ್ರಾಧಿಕಾರದ‌ ಯುವ ಬರಹಗಾರರ ಪ್ರೋತ್ಸಾಹ ನಿಧಿಯ ಅಡಿಯಲ್ಲಿ ಪ್ರಕಟಗೊಂಡಿದೆ. 'ಈ-ಹೊತ್ತಿಗೆ'ಯ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ವಿಜೇತ ಕೃತಿ 'ನೀಲಿ ಚುಕ್ಕಿಯ ನೆರಳು' ಇವರ ಎರಡನೇ ಕವನ ಸಂಕಲನ.


ಮಧುರಾಣಿ

ಮೌನೇಶ್ ನವಲಹಳ್ಳಿ
Bio

SANGAM 2022

ವೃತ್ತಿಯಲ್ಲಿ ಇಂಗ್ಲಿಷ್ ಅಧ್ಯಾಪಕಿಯಾಗಿರುವ ಮಧುರಾಣಿ ಎಚ್ ಎಸ್ ಮೂಲತಃ ದಾವಣಗೆರೆ ಸೀಮೆಯವರು. ಪ್ರಸ್ತುತ ಮೈಸೂರಿನಲ್ಲಿರುವ ಇವರು ಕವಯತ್ರಿ, ಅಂಕಣಕರ‍್ತಿ ಹಾಗೂ ಭಾಷಾಂತರಕಾರರು. ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ ನಿಯಮಿತ ಲೇಖನಗಳು ಪ್ರಕಟಗೊಂಡಿವೆ. &#೩೯;ಕೆಂಡಸಂಪಿಗೆ&#೩೯; ಇ-ಪತ್ರಿಕೆಯ ಅಂಕಣ ಬರಹಗಾರರು. ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿಯೂ ಸೇರಿದಂತೆ ಹಲವೆಡೆ ಇವರ ಕವಿತೆಗಳು ಪ್ರಶಂಸಿಸಲ್ಪಟ್ಟಿವೆ. ಇವರ ಮೊದಲ ಕವನ ಸಂಕಲನ‌ &#೩೯;ನವಿಲುಗರಿಯ ಬೇಲಿ&#೩೯; ಪುಸ್ತಕ‌ ಪ್ರಾಧಿಕಾರದ‌ ಯುವ ಬರಹಗಾರರ ಪ್ರೋತ್ಸಾಹ ನಿಧಿಯ ಅಡಿಯಲ್ಲಿ ಪ್ರಕಟಗೊಂಡಿದೆ. &#೩೯;ಈ-ಹೊತ್ತಿಗೆ&#೩೯;ಯ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ವಿಜೇತ ಕೃತಿ &#೩೯;ನೀಲಿ ಚುಕ್ಕಿಯ ನೆರಳು&#೩೯; ಇವರ ಎರಡನೇ ಕವನ ಸಂಕಲನ.

Bio

SANGAM 2022

ಹೆಸರು::ಪ್ರಕಾಶ್ ಪೊನ್ನಾಚಿ ವಿಳಾಸ::ಬಿನ್ ಪುಟ್ಟಪ್ಪ ಪೊನ್ನಾಚಿ ಗ್ರಾಮ ಮತ್ತು ಅಂಚೆ ಹನೂರು ತಾಲ್ಲೂಕು ಚಾಮರಾಜನಗರ ಜಿಲ್ಲೆ ೫೭೧೩೨೦ ದೂರವಾಣಿ:೯೯೭೨೮೨೩೨೨೨ ಪರಿಚಯ ಪ್ರಕಟಿತ ಕೃತಿ ಮಣ್ಣಿಗೆ ಬಿದ್ದ ಮಳೆ ಕವನ ಸಂಕಲನ (೨೦೧೪ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ ಯುವ ಬರಹಗಾರರ ಚೊಚ್ಚಲ ಕೃತಿಯಲ್ಲಿ ಆಯ್ಕೆಗೊಂಡದ್ದು) ಪ್ರಶಸ್ತಿ.. ೨೦೧೯ ಪ್ರಜಾವಾಣಿ ದೀಪಾವಳಿ ಕವಿತೆ ಸ್ರ‍್ಧೆ ತೃತೀಯ ಬಹುಮಾನ(ಅಸ್ಪೃಶ್ಯ ಗಿಳಿ ಮತ್ತು ಮಾಯಕಾರ) ೨೦೧೯ ಕಹಳೆ ಕಾವ್ಯ ಪ್ರಶಸ್ತಿ ಮೊದಲ ಬಹುಮಾನ ೨೦೧೯ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ನೀಡುವ ಮೀನಾಕ್ಷಿ ಜ್ಯೋತಿ ದತ್ತಿ ಪ್ರಶಸ್ತಿ ೨೦೨೧ ಕಹಳೆ ಕಥಾ ಪ್ರಶಸ್ತಿ ಮೊದಲ ಬಹುಮಾನ


ಪ್ರಕಾಶ್ ಪೊನ್ನಾಚಿ

ಪ್ರವರ ಕೊಟ್ಟೂರು
Bio

SANGAM 2022

ಹುಟ್ಟಿದ ದಿನಾಂಕ: ೧೦-೦೪-೯೦ ಊರು: ಕೊಟ್ಟೂರು ವಿಳಾಸ: ಪ್ರವರ ಕೊಟ್ಟೂರು ಪೊಲೀಸ್ ಠಾಣೆಯ ಹತ್ತಿರ ಕೊಟ್ಟೂರು-೫೮೩೧೩೪ ಕೂಡ್ಲೀಗಿ(ತಾ), ಬಳ್ಳಾರಿ(ಜಿ) ಫೋ ನಂ: ೯೯೧೬೦೦೯೪೩೨ ಇ-ಮೇಲ್: pravarakumvee@gmail.com ಶಿಕ್ಷಣ: ಎಮ್.ಸಿ.ಎ- ಸಿ.ಎಮ್.ಆರ್. ಐ.ಟಿ, ಬೆಂಗಳೂರು ವೃತ್ತಿ: ಕಾಲೇಜೊಂದರಲ್ಲಿ ಉಪನ್ಯಾಸಕ ಹವ್ಯಾಸಗಳು: ಓದು, ಕವಿತೆಗಳು,ಬರಹ, ಛಾಯಾಗ್ರಹಣ, ನಾಟಕ ಕ್ರೈಸ್ಟ್ ಕಾಲೇಜಿನ ರಾಜ್ಯ ಮಟ್ಟದ ದ.ರಾ.ಬೇಂದ್ರೆ ಕವಿತ ಸ್ರ‍್ದೆಯಲ್ಲಿ ಎರಡು ಬಾರಿ ಆಯ್ಕೆ, ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಹಾಗೂ ಇ-ಪತ್ರಿಕೆಗಳಲ್ಲೂ ಲೇಖನಗಳು ಮತ್ತು ಕವಿತೆಗಳು ಪ್ರಕಟಗೊಂಡಿವೆ ಮೊದಲ ಕವಿತ ಸಂಕಲನ “ಅಜೀಬು ದುನಿಯಾ” ಮುದ್ರಣ ಹಂತದಲ್ಲಿದೆ.

Bio

SANGAM 2022

ಊರು ಬಳ್ಳಾರಿ, ಸೂರು ಬೆಂಗಳೂರು
ಕಲಿಕೆ
- ಬಿ.ಇ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್) ಪದವಿಧರ (2010), ಪಿಇಎಸ್ಐಟಿ -ಬೆಂಗಳೂರು.
- ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಿಂದ ನಿರ್ದೇಶನ ತರಬೇತಿ‌ - KANFIDA (2011).

ಕೆಲಸ
ಸಿನಿಮಾ ನಡೆ(ಡೈರೆಕ್ಶನ್) ಮತ್ತು ಬರೆವಣಿಗೆ.
ಕೆಲಸದ ಅನುಭವ
- ಕತೆಗಾರ ಮತ್ತು ನಡೆಸಾಳಾಗಿ ಮೊದಲ ಸಿನಿಮಾ 'ಅಮರ ಪ್ರೇಮಿ ಅರುಣ್' (ಚಿತ್ರೀಕರಣದಲ್ಲಿದೆ)

ನಡೆ ತಂಡದಲ್ಲಿ ನೆರವಿಗನಾಗಿ ಪಾಲ್ಗೊಂಡಿದ್ದು
- ಕೂರ್ಮಾವತಾರ (2013)
- ಸಕ್ಕರೆ (2013)
- ಎಂದೆಂದೂ ನಿನಗಾಗಿ (2014)
- ಎಂದೆಂದೂ ನಿನಗಾಗಿ (2014)
- ಕಹಿ (2016)
- ದನ ಕಾಯೋನು (2016)
- ಮುಗುಳು ನಗೆ (2017

ಹಾಡು ಬರೆದಿದ್ದು
- ಕಹಿ (2016)
- ವಿನಾಶಿನಿ (2017
- ಪ್ರೀತಿಸಬೇಡ

ಮಾತು ಬರೆದಿದ್ದು
- ವೃಕ್ಷಂ (2019)
- ಅಳಿದು ಉಳಿದವರು (2019)
- ನಿನ್ನ ಸನಿಹಕೆ (2021)
- ಯೆಲ್ಲೋ ಗ್ಯಾಂಗ್ಸ್
- ಒಂದು ಸನ್ನೆ ಒಂದು ಮಾತು
- ಪ್ರೊಡಕ್ಷನ್ #3 (ಮೋಹನ್ ಸಿಂಗ್ ಅವರ ನಿರ್ದೇಶನ ಮತ್ತು ರಿಷಿ ಅವರ ನಾಯಕ ನಟನೆಯಲ್ಲಿ)
ಕಹಳೆ ಮತ್ತು ಸಂಗಾತ ಕತಾಸ್ಪರ್ಧೆಗಳ ಬಹುಮಾನಿತ ಕತೆಗಾರ.
ಪ್ರಜಾವಾಣಿ, ಕನ್ನಡ ಪ್ರಭ, ವಿಜಯವಾಣಿ, ಮಯೂರ, ತುಷಾರ, ಸಂಕ್ರಮಣ, ಸುಧಾ, ಮಂಗಳ, ಉತ್ಥಾನ ಮತ್ತು ಇತರೆ ಪತ್ರಿಕೆಗಳಲ್ಲಿ ಪ್ರಕಟವಾದ ಕತೆಗಳ ಕತೆಗಾರ.


ಪ್ರವೀಣ್ ಕುಮಾರ್ ಜಿ
Bio

SANGAM 2022

ಹುಟ್ಟಿದ್ದು  19 ನೇ ಮಾರ್ಚ್ 1987,  ಮಂಡ್ಯ-ತುಮಕೂರು ಜಿಲ್ಲೆಯ ಗಡಿಭಾಗ 'ಕೊಡವತ್ತಿ' ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಕಾಂ ವ್ಯಾಸಂಗ ಮುಗಿಸಿ ಮಂಡ್ಯ ನಗರದಲ್ಲಿ  ಸಣ್ಣ ಉದ್ದಿಮೆ ನಡೆಸುತ್ತಿದ್ದಾರೆ. ಜೊತೆಗೆ ಸಾಹಿತ್ಯದ ಓದು-ಬರಹ  ವಿಶೇಷವಾಗಿ ಕಾವ್ಯ, ಕರ್ನಾಟಕ ಸಂಗೀತ, ಇತಿಹಾಸ, ಬೌದ್ಧಮತ ಅಧ್ಯಯನ, ಝೆನ್ ಪೇಂಟಿಂಗ್, ತತ್ವ ಮತ್ತು ಪಾಕಶಾಸ್ತ್ರಗಳಲ್ಲಿ ಆಸಕ್ತರು. * ಕರ್ನಾಟಕದ ಪ್ರಾಚೀನ ಅಡುಗೆಗಳ ಬಗ್ಗೆ ಮತ್ತು ಅವುಗಳ ಬೆಳವಣಿಗೆ ಕುರಿತಾಗಿ ಒಂದು ವರ್ಷ ಕಾಲ ವಾರ್ತಾಭಾರತಿ ಪತ್ರಿಕೆಯಲ್ಲಿ 'ಭಿನ್ನ ರುಚಿ' ಅಂಕಣ ಬರೆದಿದ್ದಾರೆ. * 'ಸಂಕಥನ' ಸಾಹಿತ್ಯ ಪತ್ರಿಕೆಯನ್ನು 2015-2017 ವರೆಗೆ ಪ್ರಕಟಿಸುತ್ತಿದ್ದರು. * ಅನೇಕ - ಸಂಕಥನ ಹೆಸರಿನಲ್ಲಿ ಕಳೆದ ಹತ್ತು-ಹದಿನೈದು ವರ್ಷಗಳಿಂದ ಸಾಹಿತ್ಯ ಸಂವಾದ, ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ, ಹಾಗೆಯೇ ಅದೇ ಹೆಸರಿನಲ್ಲಿ ಪ್ರತೀ ವರ್ಷ ಹತ್ತಾರು ಪುಸ್ತಕಗಳನ್ನು ಕೂಡ ಪ್ರಕಟಿಸುತ್ತಿದ್ದಾರೆ.

ಪ್ರಕಟಿತ ಕೃತಿಗಳು : ಭೂಮಿಗಂಧ -2006 
ಒಂದಿಷ್ಟು ಪ್ರೀತಿಗೆ 2013
ಚಂದ್ರನೀರ ಹೂ 2013
ಕೋವಿ ಮತ್ತು ಕೊಳಲು 2014 
ಲಾವೋನ ಕನಸು 2016 
ಬ್ರೆಕ್ಟ್ ಪರಿಣಾಮ 2018
ನೀರೊಳಗೆ ಮಾಯದ ಜೋಳಿಗೆ 2018
ಪ್ರೀತಿ ಮತ್ತು ಪ್ರಾಯಶ್ಚಿತ್ತ 2020
ಉಲುಹಿನ‌ ವೃಕ್ಷದ ನೆಳಲು 2020
ಹೂ ಬುಟ್ಟಿ ; ಕೆ ಎಸ್ ನರಸಿಂಹಸ್ವಾಮಿ ಕವಿತೆಗಳ ಹೊಸ ಓದು (ಸಂಪಾದನೆ)2015
ಪುರಸ್ಕಾರ : ಬೇಂದ್ರೆ ಗ್ರಂಥ ಬಹುಮಾನ - 2014
ಟೋಟೋ ಪುರಸ್ಕಾರ - 2016 
ಕಡೆಂಗೋಡ್ಲು ಕಾವ್ಯ ಪುರಸ್ಕಾರ - 2016 ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ
ಪ್ರಥಮ ಬಹುಮಾನ -2017
ನರಹಳ್ಳಿ ಪ್ರಶಸ್ತಿ - 2019


ರಾಜೇಂದ್ರ ಪ್ರಸಾದ್ - ಮಂಡ್ಯ

ರಾಮಪ್ಪ ಮಾದರ
Bio

SANGAM 2022

ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಕೋಟಿಹಾಳ ಗ್ರಾಮ ಹುಟ್ಟೂರು ಕೋಟಿಹಾಳ. ಮಕರಬ್ಬಿ. ಹೂವಿನ ಹದಗಲಿಯಲಿ ಶಾಲಾ ಕಾಲೇಜು ಶಿಕ್ಷಣ ಎಂ.ಇಡಿ ಕುವೆಂಪು ವಿಶ್ವ ವಿದ್ಯಾಲಯ.ಶಂಕರಘಟ್ಟ ಎA.ಎ ಕನ್ನಡ, ಕನ್ನಡ ವಿಶ್ವವಿದ್ಯಾಲಯ.ಹಂಪಿ, ಪ್ರಸ್ತುತ ಶ್ರೀ ಶಿವ ಶಂಕರಸ್ವಾಮಿ ಸರ್ಕಾರಿ ಪ್ರೌಢ ಶಾಲೆ, ಉತ್ತಂಗಿಯಲ್ಲಿ ಕನ್ನಡ ಶಿಕ್ಷಕ
ಪುಸ್ತಕ ಪ್ರಾಧಿಕಾರದಿಂದ ಸಹಾಯಧನ ಪಡೆದು ಪ್ರಕಟವಾದ ಪುಸ್ತಕ; ಕೆರಹೊತ್ತ ಬಸವ, ಸಂಚಯ ಮತ್ತು ಸಂಕ್ರಮಣ ಕಾವ್ಯ ಪುರಸ್ಕಾರ ಮತ್ತು ಹರಿಹರ ಶ್ರೀ ಪ್ರಶಸ್ತಿ

Bio

SANGAM 2022

ರಾಯಚೂರಿನ ಅಸ್ಕಿಹಾಳದವರು. 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೆ ಇಟ್ಟುಕೊಳ್ಳಿ' (೨೦೧೦). 'ಜುಲುಮೆ' (೨೦೧೪), 'ಬಿಡು ಸಾಕು ಈ ಕೇಡುಗಾಲಕ್ಕಿಷ್ಟು' (೨೦೨೧) ಕವನ ಸಂಕಲನಗಳು, 'ಬಂಡಾಯದ ಬೋಳಬಂಡೆಪ್ಪ' (೨೦೧೮) ರಾಯಚೂರಿನ ದಲಿತ-ಬಂಡಾಯದ ಚಳವಳಿಗಾರರ ಬದುಕಿನ ಚಿತ್ರಣ, 'ಮೈದಾನ' (೨೦೧೮) ತೆಲುಗಿನ ಗುಡಿಪಾಟಿ ವೆಂಕಟಾಚಲA ರ ಕನ್ನಡ ಅನುವಾದ, 'ಟ್ಯಾಬ್ಲಾಯಿಡ್ ಪತ್ರಿಕೋದ್ಯಮ' (೨೦೧೮), 'ಮಧುಬಾಲ: ಬೆಳ್ಳಿಪರದೆಗೆ ಕಾಲ ಬರೆದ ಕಾಗದ' ಹಿಂದಿ ಸಿನಿಮಾ ನಟಿ ಮಧುಬಾಲ ಜೀವನ ಕಥನ (೨೦೨೨) ಪ್ರಕಟಿತ ಪುಸ್ತಕಗಳು. ಕರ್ನಾಟಕ ಸಂಘ ಶಿವಮೊಗ್ಗದ 'ಡಾ.ಜಿ.ಎಸ್. ಶಿವರುದ್ರಪ್ಪ ಕಾವ್ಯ ಪ್ರಶಸ್ತಿ (೨೦೧೦), 'ಡಾ.ಪು.ತಿ.ನ ಕಾವ್ಯ-ನಾಟಕ ಪುರಸ್ಕಾರ' (೨೦೧೫) ಮತ್ತು ಬಿಡಿಗವಿತೆಗೆ ಸ್ಪರ್ಧೆಗಳಲ್ಲಿ ಬಹುಮಾನ ಲಭಿಸಿವೆ. 'ಲಂಕೇಶ್ ಪತ್ರಿಕೆ' ಕುರಿತ ಅಧ್ಯಯನಕ್ಕೆ ಪಿಎಚ್‌ಡಿ ಪಡೆದಿದ್ದಾರೆ. ಸದ್ಯ ದೆಹಲಿ ವಿಶ್ವವಿದ್ಯಾಲಯದ ಕಮಲಾ ನಹೆರು ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ.


ಡಾ. ರಮೇಶ ಅರೋಲಿ

ರಾಯಸಾಬ ಎನ್ ದರ್ಗಾದವರ
Bio

SANGAM 2022

ರಾಯಸಾಬ ಎನ್ ದರ್ಗಾದವರ ರವರು ಹುಬ್ಬಳ್ಳಿ ತಾಲೂಕು ಕಟ್ನೂರು ಗ್ರಾಮದವರು. ಪ್ರಸ್ತುತ ಹುಬ್ಬಳ್ಳಿಯಲ್ಲಿ ೨೦೧೨ ರಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದಿನ ಜೊತೆಗೆ ಕವಿತೆ ಮತ್ತು ಕಥೆ ಬರೆಯುವುದನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಇವರ ಕವಿತೆಗಳು ಪಂಜು, ಅವಧಿ, ಸಂಗಾತಿ ವೆಬ್ ಪತ್ರಿಕೆ, ವಿಜಯಸಾಕ್ಷಿ ಹಾಗೂ ಉದಯವಾಣಿ ಪ್ರೇಮಿಗಳ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿವೆ . ಇವರ ಮೊದಲ ಕೃತಿ ‘ಗಾಂಧಿ ನೇಯ್ದಿಟ್ಟ ಬಟ್ಟೆ’ ಎಂಬ ಕವನ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ ಪಡೆದು ೨೦೨೦ ರಲ್ಲಿ ಪ್ರಕಟವಾಗಿದೆ ಮತ್ತು ವಿ ಸಿ ಐರಸಂಗ ಪುಸ್ತಕ ಪ್ರಶಸ್ತಿ-೨೦೨೦, ರಾಜ್ಯ ಮಟ್ಟದ ಪ್ರಾರ್ಥನಾ ಸಾಹಿತ್ಯ ಪುರಸ್ಕಾರ-೨೦೨೧ ಪಡೆದುಕೊಂಡಿದೆ.

Bio

SANGAM 2022

ಹೆಸರು- ಸಂಘಮಿತ್ರೆ ನಾಗರಘಟ್ಟ ವಿಳಾಸ:ಶಾರದಾನಗರ ,ತಿಪಟೂರು ತಂದೆ:ಎನ್.ಕೆಹನುಮAತಯ್ಯ, ತಾಯಿ:ಶೈಲಜನಾಗರಘಟ್ಟ ಮೊ:೮೬೧೮೫೨೪೬೯೭ ಹಾಸನದ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಬಿಎ ಪದವಿ ವ್ಯಾಸಂಗ, ಟೆರೇಷಿಯನ್ಕಾಲೇಜು ಮೈಸೂರಿನಲ್ಲಿಎಂಎ ( ಆಂಗ್ಲ) ಪದವಿಯನ್ನುವ್ಯಾಸಾಂಗ ಮಾಡಿದ್ದಾರೆ. ಕವನಸಂಕಲನ: ಬೆನ್ನಿಗೆಲ್ಲಿಯಕಣ್ಣು ಹಲವು ಸಮ್ಮೇಳನದಲ್ಲಿ ಇವರ ರೇಖಾ ಚಿತ್ರಗಳು ಪ್ರದರ್ಶನಗೊಂಡಿವೆ. ಹಿಮಪಕ್ಷಿ ಎಂಬ ಆನ್ಲೈನ್ಪತ್ರಿಕೆಯನ್ನು ಸಂಪಾದಿಸುತ್ತಿದ್ದಾರೆ ಯುವ ದಸರಾ ಕವಿಗೋಷ್ಠಿ ಯುವ ಬರಹಗಾರರ ಸಮಾವೇಶ ಜಿಲ್ಲಾ ಮಹಿಳಾ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.


ಸಂಘಮಿತ್ರೆ ನಾಗರಘಟ್ಟ

ಶೋಭಾ ನಾಯಕ
Bio

SANGAM 2022

ಶೋಭಾ ನಾಯಕ ಅವರು ಆರು ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು; ‘ಗಡಿನಾಡ ಬರಹಗಾರರ ಸಾಹಿತ್ಯದಲ್ಲಿ ಸಂಸ್ಕೃತಿ ಚಿಂತನೆ’ ಎಂಬ ವಿಷಯದ ಮೇಲೆ ಎಂ.ಫಿಲ್. ಪದವಿಯನ್ನು ಪಡೆದಿರುವರು. ‘ಅನುವಾದ ಆರು ಆತ್ಮಕಥನಗಳ ವಿಶೇಷ ಅಧ್ಯಯನ’ ಎಂಬ ವಿಷಯದ ಮೇಲೆ ಪಿಹೆಚ್.ಡಿ. ಪದವಿಯನ್ನು ಪಡೆದಿರುತ್ತಾರೆ. ‘ಸಂಕ್ರಮಣ ಕಾವ್ಯ ಪುರಸ್ಕಾರ’ ಹಾಗೂ ಕರ್ನಾಟಕ ಸರಕಾರದ ಬಸವರಾಜ ಕಟ್ಟಿಮನಿ ‘ಯುವ ಸಾಹಿತ್ಯ ಪುರಸ್ಕಾರ’ ಪಡೆದುಕೊಂಡಿರುವ ಇವರು ಈವರೆಗೆ ಖ್ವಾಬೀದ ಹಸೀನಾ, ಮೌನಚರಿತೆ, ಗಡಿನಾಡ ಸಾಹಿತ್ಯ ಬಿಂಬ, ಆತ್ಮ ವೃತ್ತಾಂತ, ಆಕ್ಟೋವಿಯಾ ಪಾಜ್ ಕವಿತೆಗಳು, ವರ್ತಮಾನದ ಧೂಳು ಮುಂತಾದ ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ‘ಶಯ್ಯಾಗೃಹದ ಸುದ್ದಿಗಳು’ ಕವನ ಸಂಕಲನದ ಹಸ್ತಪ್ರತಿಗೆ ‘ರಾಜ್ಯ ಮಟ್ಟದ ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ’ ದೊರೆತಿದೆ. ‘ಶಯ್ಯಾಗೃಹದ ಸುದ್ದಿಗಳು’ ಕವನ ಸಂಕಲನಕ್ಕೆ ಬಳ್ಳಾರಿಯ ಕಾರಂತರAಗಲೋಕ ಕೊಡಮಾಡುವ ‘ಕಾರಂತ ಸಾಹಿತ್ಯ ರತ್ನ ರಾಜ್ಯಮಟ್ಟದ ಪುಸ್ತಕ ಪ್ರಶಸ್ತಿ’ ಕರ್ನಾಟಕ ಸಂಘ ಶಿವಮೊಗ್ಗ ಕೊಡಮಾಡುವ ರಾಜ್ಯಮಟ್ಟದ ಕಾವ್ಯ ವಿಭಾಗದಲ್ಲಿ ‘ಜಿ. ಎಸ್. ಶಿವರುದ್ರಪ್ಪÀ ಪ್ರಶಸ್ತಿ’, ಬೆಳಗಾವಿ ಲೇಖಕಿಯರ ಸಂಘ ಕೊಡಮಾಡುವ ‘ರಾಚಮ್ಮ ಪಾಟೀಲ ದತ್ತಿ ಪ್ರಶಸಿ-೨೦೨೨’ ದೊರಕಿದೆ. ವಿಶ್ವಕನ್ನಡ ಸಮ್ಮೇಳನ, Iಟಿsಣiಣuಣe oಜಿ ಒeಟಿeze ಃಡಿigeಟಿzಚಿ ಗೋವಾ, ತುಂಗಾ ಮಹೋತ್ಸವ ತೀರ್ಥಹಳ್ಳಿ, ಕಿತ್ತೂರು ಉತ್ಸವ, ಬೆಳಗಾವಿ ಸಾಹಿತ್ಯ ಸಮ್ಮೇಳನ, ಚಾಲುಕ್ಯ ಉತ್ಸವ ಬದಾಮಿ, ದಸರಾ ಮಹೋತ್ಸವ ಮೈಸೂರು ಮುಂತಾದ ಕಡೆ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ೨೦೧೯ರಲ್ಲಿ ಪಂಜಾಬ ಸರ್ಕಾರದ ನೇತೃತ್ವದಲ್ಲಿ ಗುರುದಾಸಪುರನಲ್ಲಿ ನಡೆದ ಭಾರತೀಯ ಕವಿಗಳ ‘ಸರ್ವಭಾರತಿ ಕವಿ ದರಬಾರ’ನಲ್ಲಿ ಆಹ್ವಾನಿತರಾಗಿದ್ದಲ್ಲದೇ; ಕೇರಳದ ಪಟ್ಟಾಂಬಿಯಲ್ಲಿ ನಡೆದ ‘ಸೌಥಇಂಡಿಯನ್ ಪೊಯೆಟ್ರಿ ಕಾರ್ನಿವಲ್ ೨೦/೨೦’, SIWಇ, PಂಒPA ಐiಣeಡಿಚಿಣuಡಿe ಈesಣivಚಿಟ ೨೦೨೧ರಲ್ಲಿಯೂ ಆಹ್ವಾನಿತರಾಗಿದ್ದು, ಕವನ ವಾಚನಗೈದಿದ್ದಾರೆ. ಬೆಳಗಾವಿಯ ರಾಣಿ ಪಾರ್ವತಿದೇವಿ ಮಹಾವಿದ್ಯಾಲಯದಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು ಪ್ರಸ್ತುತ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವರು. ಹೆಚ್ಚುವರಿಯಾಗಿ ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸರಕಾರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಉಪಸಮಿತಿಯ ಸದಸ್ಯರಾಗಿರುತ್ತಾರೆ. ಫೋಕಲ್ಯಾಂಡ, ಜಾನಪದ ಹಾಗೂ ಸಂಸ್ಕೃತಿ ಕೇಂದ್ರ ಕೇರಳ ಇದರ ಸಲಹೆಗಾರರಾಗಿ ಕರ‍್ಯ ನಿರ್ವಹಿಸುತ್ತಿದ್ದಾರೆ. ಇವರ ಕವಿತೆಗಳಲ್ಲಿ ಹೆಣ್ಣನ್ನು ಚರಿತ್ರೆಯ ಮುನ್ನೆಲೆಗೆ ತರುವ ಕ್ರಾಂತಿಕಾರಿ ಮಹಿಳಾ ವ್ಯಕ್ತಿತ್ವದ ತುಡಿತ ಹಾಗೂ ಮಹಿಳಾ ಮನಸ್ಸಿನ ಪ್ರಾತಿನಿಧಿಕತೆ ಪ್ರಕಟವಾಗಿರುವುದನ್ನು ಕಾಣಬಹುದಾಗಿದೆ. ಕವಿತೆಗಳ ಮೂಲಕ, ಚಿತ್ರಕಲೆಯ ಮೂಲಕ ಹಾಗೂ ಶಿಕ್ಷಣದ ಮೂಲಕ ಮಹಿಳಾ ಜಾಗೃತಿಯನ್ನು ಮೂಡಿಸುತ್ತಿರುವುದು ಇವರ ವಿಶಿಷ್ಠತೆಯಾಗಿದೆ. ವಿಳಾಸ: ಡಾ. ಶೋಭಾ ನಾಯಕ ‘ಚಾರ್ಕ್ಲ’ ೬೯೨ ಎನ್.ಎ.ಹನುಮಣ್ಣನವರ ಮಾರ್ಗ, ಹನುಮಾನ ನಗರ ಬೆಳಗಾವಿ, ಕರ್ನಾಟಕ. ೫೯೦೦೧೯.

Bio

SANGAM 2022

ಸಿದ್ದು ಸತ್ಯಣ್ಣವರ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳದವರು. ವೃತ್ತಿಯಿಂದ ಪತ್ರರ‍್ತ. ಹೊಲ, ಅಪ್ಪ ಮತ್ತು ನಾನು (ಪ್ರಬಂಧ ಸಂಕಲನ), ಮಹಾನದಿಯ ಹರಿವಿನಗುಂಟ (ಛತ್ತೀಸಗಡ ಪ್ರವಾಸ ಕಥನ), ಕನಸ ಬೆನ್ನತ್ತಿ ನಡಿಗೆ,  ಗಾಳಿಯ ಮಡಿಲು (ಕವನ ಸಂಕಲನಗಳು). ಕನಸ ಬೆನ್ನತ್ತಿ ನಡಿಗೆ ಕವನ ಸಂಕಲನದ ಹಸ್ತಪ್ರತಿಗೆ ರ‍್ನಾಟಕ ಸಾಹಿತ್ಯ ಅಕಾಡೆಮಿಯ ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ, ಮಹಾನದಿಯ ಹರಿವಿನಗುಂಟ ಪ್ರವಾಸಕಥನಕ್ಕೆ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್, ಶಿವಮೊಗ್ಗ ರ‍್ನಾಟಕ ಸಂಘದ ಪುಸ್ತಕ ಬಹುಮಾನಗಳು ಸಂದಿವೆ.


ಸಿದ್ದು ಸತ್ಯಣ್ಣವರ

ಸುಮಿತ್ ಮೇತ್ರಿ
Bio

SANGAM 2022

೧೯೮೬
ಸೆಪ್ಟೆಂಬರ್ ೧೪ರಂದು ಜನಿಸಿದ ಸುಮಿತ್ಮೇತ್ರಿ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಹಲಸಗಿಯವರು. ಪದವಿ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ, ಸ್ನಾತಕೋತ್ತರ ಶಿಕ್ಷಣ ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸಯೊoದಿಗೆ ವಿಜ್ಞಾನ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಜೊತೆಗೆ "ಸುಗಮ" ಅಂತರ್ಜಾಲ ಪತ್ರಿಕೆ ಸoಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. "ಥಟ್ಅAತಬರೆದುಕೊಡುವರಶೀದಿಯಲ್ಲಕವಿತೆ" (೨೦೧೯- ಕವನಸಂಕಲನ). ನಾಟಕಅಕಾಡೆಮಿಪುರಸ್ಕಾರಕ್ಕೆಆಯ್ಕೆಯಾದ "ಅರಗಿನಅರಮನೆ" ಇವರಅಪ್ರಕಟಿತನಾಟಕ. ಕರ್ನಾಟಕಸಾಹಿತ್ಯಅಕಾಡೆಮಿಯ "ಸ್ವಾತಂತ್ರ‍್ಯಹೋರಾಟದಲ್ಲಿಕರ್ನಾಟಕ - ಹಲಸಂಗಿ" (೨೦೨೨) ಪ್ರಕಟಿತಕೃತಿಗಳು. ಜೊತೆಗೆಇವರ "ಸ್ವಾತಂತ್ರ‍್ಯಹೋರಾಟದಲ್ಲಿಕರ್ನಾಟಕ - ಹಲಸಂಗಿ" ಕೃತಿಕನ್ನಡಭಾಷಾಭಾರತಿಪ್ರಾಧಿಕಾರದಿಂದಇAಗ್ಲಿಷ್ಮತ್ತುಹಿAದಿಭಾಷೆಗಳಲ್ಲಿಅನುವಾದವಾಗಿದೆ. ರಾಜ್ಯಮಟ್ಟದವಿಜ್ಞಾನಆವಿಷ್ಕಾರಗಳಲ್ಲಿತೊಡಗಿಸಿಕೊAಡಿದ್ದು, ಅನೇಕಇಲಾಖಾಪುರಸ್ಕಾರಗಳಿಗೆಭಾಜನರಾಗಿದ್ದಾರೆ. ಶಿಕ್ಷಣಇಲಾಖೆಗೆಇದುವರೆಗೂ ೧೮ ರಾಜ್ಯಮಟ್ಟದಪ್ರಶಸ್ತಿಯನ್ನುತಂದುಕೊಟ್ಟಿದ್ದಾರೆ. ೨೦೧೯ರಕರ್ನಾಟಕಸಾಹಿತ್ಯಅಕಾಡೆಮಿಯುವಕವಿಪುರಸ್ಕಾರ, ಕನ್ನಡಸಾಹಿತ್ಯಪರಿಷತ್ತಿನಪ್ರೊ. ಡಿಸಿಅನಂತಸ್ವಾಮಿದತ್ತಿ, ಸಮೀರವಾಡಿದತ್ತಿಪ್ರಶಸ್ತಿ, ಸಾಹಿತ್ಯಚಿಗುರುಪ್ರಶಸ್ತಿಸೇರಿದಂತೆಹಲವುಪುಸ್ತಕಬಹುಮಾನಹಾಗೂಜನಮಿತ್ರ, ಜನಶಕ್ತಿಕಾವ್ಯಸ್ಪರ್ಧೆಗಳಿಂದಪುರಸ್ಕಾರಾಗಿರುವಸುಮಿತ್ಮೇತ್ರಿಅವರಕವಿತೆಗಳುಕಾವ್ಯಾಸಕ್ತರಗಮನಸೆಳೆದಿವೆಮತ್ತುವಿಮರ್ಶಕರವಲಯದಲ್ಲಿಚರ್ಚೆಗೆಗ್ರಾಸವಾಗುವುದರಜೊತೆಗೆಇAಗ್ಲಿಷ್, ಹಿಂದಿಸೇರಿದAತೆಅನೇಕಭಾಷೆಗಳಲ್ಲಿಅನುವಾದಗೊAಡಿವೆ.

Bio

SANGAM 2022

ಜನನ 17, 1970.ರಾಷ್ಟ್ರೋತ್ಥಾನ, ಮೌಂಟ್ ಕಾರ್ಮೆಲ್, ಮಾನಸಗಂಗೋತ್ರಿ ಎಂಏ, ಬಿಎಡ್, ಎಂಫಿಲ್ ಓದು. ಕತೆ ಕವಿತೆ ನಾಟಕ ಪ್ರಬಂಧಗಳೊಂದಿಗೆ ಭಾಷಾ ಸಂಶೋಧನೆ, ಅನುವಾದ‌ ಆಸಕ್ತಿಯ ಕ್ಷೇತ್ರಗಳು. ಪ್ರಸ್ತುತ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಪ್ರಕಟಿತ ಕೃತಿಗಳು:
1. ಬದುಕು ಪ್ರಿಯವಾಗುವ ಬಗೆ (ಕಥಾಸಂಕಲನ), ದಿಟ್ಟಿಯು ನಿನ್ನೊಳು ನೆಟ್ಟರೆ (ಕಥಾಸಂಕಲನ), ಕನ್ನಡಿಯನ್ನು ನೋಡಲಾರೆ (ಕಥಾಸಂಕಲನ), ಬಯಲ ಧ್ಯಾನ (ಕವನ ಸಂಕಲನ), ಪರಿಷ್ಕೃತೆ (ಶೇಕ್ಸಪಿಯರ್ ಅಧ್ಯಯನ), ಪ್ರಿಯಸಖಿ ಪಾತರಗಿತ್ತಿ (ಪ್ರಬಂಧ ಸಂಕಲನ), ಸಮನ್ವಿತೆ ಗೋಮಾಂತ (ಪ್ರವಾಸ ಕಥನ) ಜೋಳದರಾಶಿ - ಒಂದು ಹಳ್ಳಿಯ ಸಾಂಸ್ಕೃತಿಕ ಅಧ್ಯಯನ ( ಕರ್ನಾಟಕ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಕೃತಿ) ಪ್ರಶಸ್ತಗಳು :
1) ಸೇಡಂನ ಅಮ್ಮ ಪ್ರಶಸ್ತಿ
2) ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ
3) ಕಸಾಪದ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ಪ್ರಶಸ್ತಿ
4) ಸಿರಿಗನ್ನಡ ಪ್ರತಿಷ್ಠಾನ ಪ್ರಶಸ್ತಿ, ಗುರುಮಿಟ್ಕಲ್
5) ತುಮಕೂರಿನ ಅನನ್ಯ ಪ್ರಕಾಶನ ಕೊಡಮಾಡುವ ದಿ. ಸಾಂಬಶಿವಪ್ಪ ಪ್ರಶಸ್ತಿ
6) ಜನನಿರತ್ನ ರಾಜ್ಯ ಪ್ರಶಸ್ತಿ ಮತ್ತೂ ಹಲವಾರು


ಸುಧಾ ಚಿದಾನಂದ ಗೌಡ

ಸೈಫ್ ಜಾನ್ಸೆ ಕೊಟ್ಟೂರು
Bio

SANGAM 2022

ನಿಜನಾಮ : ಆರ್ ಎಸ್ ಸೈಫುಲ್ಲಾ ಕಾವ್ಯನಾಮ : ಸೈಫ್ ಜಾನ್ಸೆ ಕೊಟ್ಟೂರು, ಬಳ್ಳಾರಿ ಜಿಲ್ಲೆ ಜನನ: 07:10:1978 ವ್ಯಾಸಂಗ : ಎಮ್ ಏ ಬಿಎಡ್ ಪ್ರಸ್ತುತ ಸಂಡೂರು ತಾಲೂಕಿನ ಹೆಚ್. ಕೆ. ಹಳ್ಳಿ ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿ: ಅಯ್ಯಂಗಾರಿಯ ಹತ್ತು ಪೈಸೆ ಬ್ರೆಡ್ಡು ಮತ್ತು ಹುಲ್ಲಿಗೆ ಹುಟ್ಟಿದ ಬೀದಿ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಕಾವ್ಯ ಪ್ರಕಟಗೊಂಡು ಓದುಗರ ಮನ ಗೆದ್ದಿದ್ದಾರೆ. ಅರಳು ಸಾಹಿತ್ಯ ಪ್ರಶಸ್ತಿ, ಭೇಂದ್ರೆ ಗ್ರಂಥ ಬಹುಮಾನ ಮತ್ತಿತರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Bio

SANGAM 2022

ವಿಲ್ಸನ್ ಕಟೀಲ್ ಕಾವ್ಯನಾಮದಿಂದ ಬರೆಯುವ ವಿಲ್ಸನ್ ರೋಶನ್ ಸಿಕ್ವೇರಾ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲಿನವರು. ಹುಟ್ಟಿದ ದಿನಾಂಕ – ೩೧.೦೮.೧೯೮೦. ಕಾರಣಾಂತರಗಳಿಂದ ಇಂಜಿನಿಯರಿಂಗ್ ವ್ಯಾಸಂಗವನ್ನು ತ್ಯಜಿಸಿ ಸಾಹಿತ್ಯದತ್ತ ಆರ‍್ಷಣೆ. ತಮಿಳು ಹಾಡುಗಳಿಂದ ಸ್ಪರ‍್ಥಿಗೊಂಡು ಕಾವ್ಯದತ್ತ ಒಲವು. ತನ್ನ ತಾಯಿಭಾಷೆ ಕೊಂಕಣಿಯಲ್ಲಿ ಕತೆ, ಕವಿತೆ, ಗೀತೆ ಹಾಗೂ ಇನ್ನಿತರ ಸಾಹಿತ್ಯ ಕೃಷಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಂಕಣಿಯಲ್ಲಿ ಇದುವರೆಗೆ ’ದೀಕ್ ಆನಿ ಪೀಕ್’’, ’ಪಾವ್ಳೆ’, ’ಎನ್‍ಕೌಂಟರ್’ ಕವನ ಸಂಕಲನಗಳು ಪ್ರಕಟವಾಗಿವೆ. ಮೂರು ಬಾರಿ ಅತ್ಯುತ್ತಮ ಗೀತೆರಚನೆಗಾಗಿ, ಮಾಂಡ್ ಸೊಭಾಣ್ ಸಂಸ್ಥೆ ಕೊಡಮಾಡುವ ಜಾಗತಿಕ ಸಂಗೀತ ಪುರಸ್ಕಾರಕ್ಕೆ ಭಾಜನರಾಗಿದ್ಡಾರೆ. ಇವರಿಗೆ ’ಕಿಟಾಳ್ ಯುವ ಪುರಸ್ಕಾರ’ವೂ ಪ್ರಾಪ್ತಿಯಾಗಿದೆ. “ಎನ್ ಕೌಂಟರ್” ಕವನ ಸಂಕಲನಕ್ಕೆ ೨೦೧೭ ರ ಪ್ರತಿಷ್ಠಿತ ವಿಮಲಾ ವಿ ಪೈ ಕಾವ್ಯ ಪುರಸ್ಕಾರ ಪ್ರಾಪ್ತಿಯಾಗಿದೆ. ಕನ್ನಡದಲ್ಲೂ ಅಪರೂಪಕ್ಕೆ ಬರೆಯುತ್ತಿದ್ದ ಇವರ ಕವಿತೆಗಳು ಟಿ.ಎಸ್. ಗೊರವರ್ ಸಂಪಾದಕತ್ವದ ’ಸಂಗಾತ’ ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಪ್ರಕಟಗೊಂಡು ಕಾವ್ಯಾಸಕ್ತರ ಗಮನ ಸೆಳೆದವು. ನಂತರ ’ಸಂಗಾತ ಪತ್ರಿಕೆ’ ಪ್ರಕಾಶನದಿಂದಲೇ ಇವರ ಮೊದಲ ಸಂಕಲನ ’ನಿಷೇಧಕ್ಕೊಳಪಟ್ಟ ಒಂದು ನೋಟು’ ಪ್ರಕಟಗೊಂಡಿತು. ಈ ಸಂಕಲನಕ್ಕೆ ಆರಿಫ್ ರಾಜಾ ಇವರ ಮುನ್ನುಡಿಯಿದೆ. ಈ ಸಂಕಲನಕ್ಕೆ ’ಯುವಕವಿಗಳ ಪ್ರಥಮ ಸಂಕಲನ’ ವಿಭಾಗದ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕೆ.ಬಿ.ಸಿದ್ದಯ್ಯ ಕಾವ್ಯ ಪುರಸ್ಕಾರ ದೊರೆತಿದೆ. ಪ್ರಸ್ತುತ “ರ‍್ಸೊ’ ಕೊಂಕಣಿ ಮಾಸಿಕ ಪತ್ರಿಕೆಯ ಸಂಪಾದಕ ಹಾಗೂ ’ಕಿಟಾಳ್’ ಸಾಹಿತ್ಯ ಜಾಲತಾಣದ ಉಪ ಸಂಪಾದಕಾರಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯವಲ್ಲದೆ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.


ವಿಲ್ಸನ್ ಕಟೀಲ್

ವಿಶಾಲ್ ಮ್ಯಾಸರ್
Bio

SANGAM 2022

ಕವಿ ವಿಶಾಲ್ ಮ್ಯಾಸರ್ ಹೊಸಪೇಟೆಯವರು
ಪ್ರಸ್ತುತ bsc ಪ್ರಥಮ ವರ್ಷದ ವಿಧ್ಯಾರ್ಥಿ, ವಿಜಯನಗರ ಮಹಾವಿದ್ಯಾಲಯ ಹೊಸಪೇಟೆ. "ಬಟ್ಟೆಗಂಟಿದ ಬೆಂಕಿ" ಎಂಬ ಅಪ್ರಕಟಿತ ಕವನ ಸಂಕಲನ ಬಿಡುಗಡೆಯಾಗುವ ಯೋಜನೆಯಲ್ಲಿದೆ. ಸಮಾಜಮುಖಿ,ಉದಯವಾಣಿ ಪತ್ರಿಕೆಯಲ್ಲಿ ಹಾಗೂ ಅವಧಿ,ದೀವಟಿಗೆ, ಬುಕ್ ಬ್ರಹ್ಮ ಮುಂತಾದ ಬ್ಲಾಗ್ ಗಳಲ್ಲಿ ಕವಿತೆ ಪ್ರಕಟವಾಗಿವೆ

Bio

SANGAM 2022

ನಾನು ಹುಟ್ಟಿದ್ದು 08-06-1958. ಮಾಗಳದಲ್ಲಿ. ಚಿಕ್ಕ ಗ್ರಾಮ. ಪ್ರಾಥಮಿಕ ಶಿಕ್ಷಣ ಪಡೆದದ್ದು ಮಾಗಳದಲ್ಲಿ. ನಂತರ ಪ್ರೌಢ ಹಾಗೂ ಕಾಲೇಜು ಶಿಕ್ಷಣ ಶಿವಮೊಗ್ಗ . ಓದಿರುವುದು ಬಿ.ಎ. ಕಾಲೇಜು ಶಿಕ್ಷಣ ನಂತರ ಕೃಷಿ ಕೂಲಿಕಾರರ, ರೈತ ಹಾಗೂ ದೇವದಾಸಿ ವಿಮೋಚನಾ ಸಂಘದಲ್ಲಿ ಹಾಗೂ ಸಾಹಿತ್ಯ ಸಂಘಟನೆ ಯಲ್ಲಿ ಆಕ್ಟಿವಿಸ್ಟ್. ಸದ್ಯ ಬಳ್ಳಾರಿಯಲ್ಲಿ ವಾಸ. ಮುಗ್ದ ಮೋಚಿಯ ಹಾಡು, ಮುನ್ನುಗ್ಗಿದ ಹೆಜ್ಜೆಗಳು, ದೇವರ ಗೂಳಿ, ಧರೆಯ ಗರ್ಭದ ಹಾಡು, ಕವನ ಸಂಕಲನಗಳು. ಹನುಮನ ಹಲಿಗೆ ಕಾದಂಬರಿ. ಬರೆಯುವುದು, ಓದುವುದು, ನನ್ನ ಇಷ್ಟದ ಕೆಲಸ.


ವೆಂಕಟೇಶ್. ಪಿ.ಆರ್.

ಎನ್ ಡಿ ವೆಂಕಮ್ಮ
Bio

SANGAM 2022

ಎನ್ ಡಿ ವೆಂಕಮ್ಮ ಜನನ : 1- 7- 1952 ಬಳ್ಳಾರಿ ವೃತ್ತಿ: ಕೃಷಿ ಇಲಾಖೆಯಲ್ಲಿ ಬೆರಳಚ್ಚುಗಾರ್ತಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾಗಿ ಇದೀಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಪ್ರವೃತ್ತಿ: ಸಾಹಿತಿಯಾಗಿ ಗುರುತಿಸಿಕೊಂಡು ಕಥೆ ಕವನ ಮತ್ತು ಲೇಖನಗಳನ್ನು ಬರೆದಿದ್ದಾರೆ. ಭೀಮಸಂದೇಶ, ಮಾದಾರ ಚನ್ನಯ್ಯ ಮತ್ತು ಧೂಳಯ್ಯನವರ ಒಂಬತ್ತು ಕಿರುಮಾಲಿಕೆಯನ್ನಲ್ಲದೆ ಬಯಲೇ ಸಂಗಾತಿ, ಯಾರು ಸಾಕ್ಷಿ ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಪ್ರಸ್ತುತ ಬಹುಜನ ಸಾಹಿತ್ಯ ಅಕಾಡೆಮಿ ಹೈದರಾಬಾದಿನ ಕರ್ನಾಟಕ ಶಾಖೆಯ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿತ್ತಿದ್ದಾರೆ.

Bio

SANGAM 2022

ಮಾಜಿ ಜಿಲ್ಲಾ ಗೌರವ ಕಾರ್ಯದರ್ಶಿಗಳು / ಹಾಲಿ ಅಲ್ಪ ಸಂಖ್ಯಾತ ಪ್ರತಿನಿಧಿ - ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲೆ. ಹುಟ್ಟಿದ ದಿನಾಂಕ 01-11-1968 ಉದ್ಯೋಗ :- ಜೆ.ಎಸ್ .ಡಬ್ಲ್ಯು ನಲ್ಲಿ ಸಣ್ಣ ಗುತ್ತಿಗೆದಾರ.
ಬರೆದ ಪುಸ್ತಕಗಳು
01- ನಕಾಬ್ ನೊಳಗಿನ ನಯನಗಳು ( ಕಥಾ ಸಂಕಲನ)
02- ನೆನಪುಗಳಿವೆ ಅವೇ ಸಾಕು ( ಕವನ ಸಂಕಲನ
03- ಆತ್ಮಧ್ಯಾನದ ನಾದ (ಗಜಲ್ ಸಂಕಲನ
ಪ್ರಕಟನೆಯ ಹಂತದಲ್ಲಿವ ಪುಸ್ತಕಗಳು - 03
ಪ್ರಕಾಶನದಿಂದ ಪ್ರಕಟಿತ ಪುಸ್ತಕಗಳೂ - 07
ಪ್ರಶಸ್ತಿಗಳು
೦1- ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ.
02-ಸಿಂಪಿಲಿಂಗಣ್ಣ ರಾಜ್ಯ ಪ್ರಶಸ್ತಿ.
03-ಭಾವೈಕ್ಯತಾ ವೇದಿಕೆಯ ಜಿಲ್ಲಾ ಪ್ರಶಸ್ತಿ


ಅಬ್ದುಲ್ ಎಚ್ ಐ
Sangam Fest

Empathy
Enlightenment
Emancipation

About Programme Address Contact Us

Copyright © 2022 sangamfest22ballari@gmail.com